ಪರಲೋಕಕ್ಕೆ ಸತ್ಯವೇದದ ದಾರಿ

Video

 

June 7, 2015

ಬೈಬಲ್ ರಕ್ಷಣೆಯ ಕುರಿತಾಗಿ ಬಹಳ ಸ್ಪಷ್ಟವಾಗಿರುತ್ತದೆ. ನೀನು ಎಷ್ಟೊಂದು ಒಳ್ಳೇಯವನೆಂಬದರ ಮೇಲೆ ಅದು ಅವಲಂಭಿಸಿಲ್ಲ. ಬಹಳಷ್ಟು ಜನರು ತಾವು ತುಂಬಾ ಉತ್ತಮರೆಂದು ಭಾವಿಸಿಕೊಳ್ಳುತ್ತಾರೆ, ಮತ್ತು ತಾವು ಖಂಡಿತವಾಗಿ ಪರಲೋಕಕ್ಕೆ ಹೋಗುವರೆಂದುಕೊಳ್ಳುತ್ತಾರೆ ಆದರೆ ಬೈಬಲ್ ಹೇಳುತ್ತದೆ, “ ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಕಾಣದೆ ಹೋಗಿದ್ದಾರೆ.” ( ರೋಮ 3:23) ಬೈಬಲ್ ಹೇಳುತ್ತದೆ, “ ನೀತಿವಂತನು ಇಲ್ಲ, ಒಬ್ಬನೂ ಇಲ್ಲ” (ರೋಮ 3:10). ನಾನು ನೀತಿವಂತನಲ್ಲ. ನೀನು ನೀತಿವಂತನಲ್ಲ, ಮತ್ತು ನಮ್ಮ ಒಳ್ಳೆತನದಿಂದಲೇ ಪರಲೋಕಕ್ಕೆ ಹೋಗಬಹುದಾಗಿದ್ದಲ್ಲಿ ನಮ್ಮೊಳಗೆ ಒಬ್ಬರೂ ಪರಲೋಕಕ್ಕೆ ಹೋಗಲಾಗುತ್ತಿರಲಿಲ್ಲ.

ಅಲ್ಲದೆ ಪ್ರಕಟಣೆ 21:8 ರಲ್ಲಿ ಬೈಬಲ್ ಹೀಗೆ ಸಹ ಹೇಳುತ್ತದೆ, “ಆದರೆ ಹೇಡಿಗಳು, ನಂಬಿಕೆಯಿಲ್ಲದವರು, ಅಸಹ್ಯವಾದದ್ದರಲ್ಲಿ ಸೇರಿದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾರಾಧಕರು, ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣ”. ನಾನು ಮುಂಚೆ ಸುಳ್ಳು ಹೇಳಿದ್ದೇನೆ. ಪ್ರತಿಯೊಬ್ಬರೂ ಸುಳ್ಳು ಹೇಳಿದ್ದಾರೆ, ಆದ್ದರಿಂದ ನಾವೆಲ್ಲರೂ ಪಾಪಮಾಡಿದ್ದೇವೆ, ಮತ್ತು ನಾವು ಸುಳ್ಳು ಹೇಳುವದಕ್ಕಿಂತಲೂ ಘೋರ ಪಾಪಗಳನ್ನು ಮಾಡಿದ್ದೇವೆ. ನಾವು ಪ್ರಾಮಾಣಿಕವಾಗಿ ಹೇಳೋಣ: ನಾವೆಲ್ಲರೂ ನರಕಕ್ಕೆ ಯೋಗ್ಯರು.

ಆದರೆ ಬೈಬಲ್ ಹೇಳುತ್ತದೆ, “ ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ಇಟ್ಟಿರುವ ತನ್ನ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ”(ರೋಮ 5:8). ಯೇಸು ನಮ್ಮನ್ನು ಪ್ರೀತಿಸಿದ್ದರಿಂದ ಭೂಮಿಗೆ ಬಂದನು. ಆತನು ಶರೀರಧಾರಿಯಾಗಿ ಬಂದ ದೇವರಾಗಿದ್ದನೆಂದು ಬೈಬಲ್ ಹೆಳುತ್ತದೆ. ಅಂದರೆ ದೇವರು ಮಾನವ ರೂಪವನ್ನು ಧರಿಸಿದನು.ಆತನು ಪಾಪರಹೀತ ಜೀವನವನ್ನು ಜೀವಿಸಿದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಅವರು ಆತನನ್ನು ಹೊಡೆದರು, ಆತನ ಮೆಲೆ ಉಗುಳಿದರು, ಮತ್ತು ಆತನನ್ನು ಶಿಲುಬೆಗೆ ಜಡಿದರು. ಆತನು ಶಿಲುಬೆಯ ಮೇಲೆ ಇದ್ದಾಗ, “ ಆತನೇ ಸ್ವತಃ ನಮ್ಮ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡನು” ಎಂದು ಬೈಬಲ್ ಹೇಳುತ್ತದೆ(1ಪೆತ್ರ 2:24) ಆದ್ದರಿಂದ ನೀನು ಮಾಡಿದ ಪ್ರತಿಯೊಂದು ಪಾಪ ಮತ್ತು ನಾನು ಮಾಡಿದ ಪಾಪವು ಯೆಸುವನ್ನು ಪಾಪಿಯಾಗಿ ಮಾಡಿತು. ಆತನು ನಮ್ಮ ಪಾಪಗಳಿಗಾಗಿ ದಂಡಿಸಲ್ಪಟ್ಟನು. ಆತನು ಮರಣಿಸಿದಾಗ ಅವರು ಆತನ ಶರೀರವನ್ನು ತೆಗೆದುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು, ಮತ್ತು ಆತನ ಆತ್ಮವು ಮೂರು ರಾತ್ರಿ, ಮೂರು ಹಗಲು ಪಾತಾಳಕ್ಕೆ ಇಳಿದುಹೋಯಿತು(ಅ.ಕೃತ್ಯ 2:31). ಮೂರು ದಿನಗಳ ಬಳಿಕ ಆತನು ಸತ್ತವರೊಳಗಿಂದ ಪುನಃ ಜೀವಿತನಾಗಿ ಎದ್ದನು. ಆತನು ತನ್ನ ಕೈಗಳಲ್ಲಿನ ರಂಧ್ರಗಳನ್ನು ಶಿಷ್ಯರಿಗೆ ತೋರಿಸಿದನು. ಯೇಸು ಸರ್ವರಿಗಾಗಿಯೂ ಸತ್ತನೆಂಬದಾಗಿ ಬೈಬಲ್ ಬಹಳ ಸ್ಪಷ್ಟವಾಗಿ ತಿಳಿಸುತ್ತದೆ. ಆತನು ನಮ್ಮ ಪಾಪಗಳಿಗಾಗಿ ಮಾತ್ರವಲ್ಲದೆ ಸರ್ವಲೋಕದ ಪಾಪಪರಿಹಾರಕ್ಕಾಗಿ ಸತ್ತನು”ಎಂದು ಬೈಬಲ್ ಹೇಳುತ್ತದೆ (1ಯೋಹಾನ 2:2). ಆದರೆ ರಕ್ಷಣೆ ಹೊಂದಬೇಕೆಂದರೆ ನಾವು ಮಾಡಬೇಕಾದ ಒಂದು ಕಾರ್ಯವಿರುತ್ತದೆ. ಬೈಬಲ್ ನಲ್ಲಿ ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಈ ಪ್ರಶ್ನೆಯಿರುತ್ತದೆ, “ ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು?” ಇದಕ್ಕೆ ಅವರು” ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ ಮತ್ತು ನಿಮ್ಮ ಮನೆಯವರೂ ರಕ್ಷಣೆ ಹೊಂದುವರು”. ಇಷ್ಟೇ ವಿಷಯ. ಹೊರತು ನೀನು ಒಂದು ಚರ್ಚ್ ಸೇರಿಕೋ ಆಗ ರಕ್ಷಣೆ ಹೊಂದುವಿ ಎಂದಾಗಲಿ, ದೀಕ್ಷಾಸ್ನಾನ ಹೊಂದು, ಆಗ ರಕ್ಷಣೆ ಹೊಂದುವಿ ಎಂದಾಗಲಿ ಆತನು ಹೇಳಲಿಲ್ಲ. ಒಳ್ಳೆಯವನಾಗಿ ಜೀವಿಸು ಆಗ ನೀನು ರಕ್ಷಿಸಲ್ಪಡುವಿಯೆಂದು ಹೇಳಲಿಲ್ಲ. ನಿಮ್ಮ ಪಾಪಗಳಿಗೆಲ್ಲಾ ಪಶ್ಚಾತಾಪ ಪಡಿರಿ, ಆಗ ರಕ್ಷಣೆ ಹೊಂದುವಿರಿ ಎಂದು ಹೇಳಲಿಲ್ಲ, ಇಲ್ಲವೆ ಇಲ್ಲ. ಆತನು ಹೇಳಿದ್ದು “ ನಂಬಿರಿ” ಎಂದು.

ಬೈಬಲಿನಲ್ಲಿ ಅತ್ಯಂಥ ಪ್ರಸಿದ್ಧ ವಚನವೊಂದಿದೆ, ಆದು “ಇನ್ ಅಂಡ್ ಔಟ್ ಬರ್ಜರ್” ಶಾಪ್ ನ ಒಂದು ಕಪ್ ಅಡಿಯಲ್ಲಿ ಸಹ ಬರೆಯಲ್ಪಟ್ಟಿದೆ, ಅದು ಬಹಳ ಪರಿಚಿತವಾದ ವಚನ, ಎಲ್ಲರೂ ಅದನ್ನು ಕೇಳಿದ್ದಾರೆ “ ದೇವರು ಲೋಕದ ಮೆಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು, ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು”(ಯೋಹಾನ 3:16). ನಿತ್ಯವಾದ ಅಂದರೆ ನಿತ್ಯವಾದದ್ದೇ.ಯುಗಯುಗಕ್ಕೂ ಎಂದು ಅದರ ಅರ್ಥವಾಗಿದೆ, ಮತ್ತು ಯೆಸು ಹೀಗೆ ಹೆಳಿದನು, “ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ;ಅವು ಎಂದೆಂದಿಗೂ ನಾಶವಾಗುವದೇ ಇಲ್ಲ; ಅವುಗಳನ್ನು ಯಾರೂ ನನ್ನ ಕೈಗಳೊಳಗಿಂದ ಕಸಕೊಳ್ಳರು” (ಯೋಹಾನ 10:28). ಯೋಹಾನ 6:47 ರಲ್ಲಿ ಬೈಬಲ್ ಹೀಗೆ ಹೇಳುತ್ತದೆ, “ನನ್ನನ್ನು ನಂಬಿರುವಾತನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ”. ಆದ್ದರಿಂದ ನೀವು ಯೇಸುವಿನಲ್ಲಿ ನಂಬಿಕೆಯಿಡುವದಾದರೆ ನೀವು ನಿತ್ಯಜೀವವನ್ನು ಹೊಂದಿರುವಿರೆಂದು ಬೈಬಲ್ ಹೇಳುತ್ತದೆ. ನೀವು ಸದಾಕಾಲವೂ ಜೀವಿಸಲಿರುವಿರಿ. ನೀವು ನಿಮ್ಮ ರಕ್ಷಣೆಯನ್ನು ಕಳೆದುಕೊಳ್ಳಲಾರಿರಿ. ಅದು ನಿತ್ಯವಾದದ್ದು. ನೀವು ಒಮ್ಮೆ ರಕ್ಷಣೆ ಹೊಂದಿದರೆ, ಒಮ್ಮೆ ಆತನಲ್ಲಿ ನಂಬಿಕೆಯಿಟ್ಟರೆ, ನೀವು ನಿತ್ಯನಿತ್ಯಕ್ಕೂ ರಕ್ಷಣೆ ಹೊಂದಿದವರು, ಮತ್ತು ಏನೇ ಸಂಭವಸಿದರೂ ನೀವು ನಿಮ್ಮ ರಕ್ಷಣೆಯನ್ನು ಕಳೆದುಕೊಳ್ಳಲಾರಿರಿ.

ನಾನು ಹೋಗಿ ಒಂದು ಭಯಂಕರ ಪಾಪವನ್ನು ಮಾಡಿದರೂ ಸಹ, ದೇವರು ಅದಕ್ಕಾಗಿ ನನ್ನನ್ನು ಈ ಭೂಮಿಯಲ್ಲಿ ದಂಡಿಸುವನು. ನಾನು ಹೋಗಿ ಒಬ್ಬನನ್ನು ಕೊಲೆ ಮಾಡುವದಾದರೆ ಅದಕ್ಕಾಗಿ ದೇವರು ಶಿಕ್ಷೆಯಾಗುವಂತೆ ಖಂಡಿತವಾಗಿ ಮಾಡುವನು, ಜೈಲಿಗೆ ಹಾಕಲ್ಪಡುವೆನು ಅಥವಾ ಇನ್ನೂ ಭಯಂಕರವೆಂದರೆ ಮರಣಶಿಕ್ಷೆಗೆ ಗುರಿಯಾಗುವೆನು. ಈ ಲೋಕ ನನಗೆ ಏನೇ ಶಿಕ್ಷೆ ವಿಧಿಸಿದಾಗ್ಯೂ ದೇವರು ನನಗೆ ಕಠಿಣ ದಂಡನೆಯಾಗುವಂತೆ ಮಾಡುವನು, ಆದರೆ ನರಕಕ್ಕಂತೂ ಹಾಕುವದಿಲ್ಲ. ನಾನು ಈಗಾಗಲೇ ರಕ್ಷಣೆ ಹೊಂದಿರುವದರಿಂದಾಗಿ ನಾನು ಮಾಡುವ ಯಾವ ಸಂಗತಿಯೂ ನನ್ನನು ನರಕಕ್ಕೆ ಒಯ್ಯಲಾರದು. ಯಾಕೆಂದರೆ ಆತನನ್ನು ನಂಬುವ ಯಾವನಾದರೂ ನಿತ್ಯಜೀವವನ್ನು ಹೊಂದುವನೆಂದು ದೇವರು ವಾಗ್ದಾನ ಮಾಡಿದ್ದಾನೆ, ಮತ್ತು ಆತನು” ಬದುಕುತ್ತಾ ನನ್ನನ್ನು ನಂಬುವವನು ಎಂದಿಗೂ ಸಾಯುವದಿಲ್ಲ” ಎಂದು ಆತನು ಹೇಳಿದ್ದಾನೆ. ಆದಕಾರಣ ಬೈಬಲಿನಲ್ಲಿ ಘೋರ ಕೃತ್ಯಗಳನ್ನು ಮಾಡಿಯೂ ಹೇಗೋ ಪರಲೋಕಕ್ಕೆ ಭಾದ್ಯರಾದ ಹಲವಾರು ವ್ಯಕ್ತಿಗಳ ಉದಾಹರಣೆಗಳನ್ನು ನೋಡುತ್ತೇವೆ. ಹೇಗೆ ಸಾಧ್ಯವಾಯಿತು? ಅವರು ಬಹಳ ಒಳ್ಳೇವರಾಗಿದ್ದರಿಂದಲೋ? ಇಲ್ಲ. ಅವರು ಕರ್ತನಾದ ಯೇಸುವಿನ ಮೇಲೆ ನಂಬಿಕೆ ಇಟ್ಟದ್ದರಿಂದಲೇ ಆಗಿದೆ. ಅವರ ಪಾಪಗಳು ಕ್ಷಮಿಸಲ್ಪಟ್ಟಿವೆ. ಇನ್ನು ಕೆಲವರು ಲೋಕದ ದೃಷ್ಟಿಯಲ್ಲಿ ಉತ್ತಮರಾಗಿ ಬಾಳಿರಬಹುದು, ಆದರೆ ಅವರು ಯೇಸುವಿನಲ್ಲಿ ನಂಬಿಕೆಯಿಟ್ಟಿಲ್ಲವಾದರೆ ತಮ್ಮ ಪಾಪಗಳಿಗೆ ದಂಡನೆ ಅನುಭವಿಸುವದಕ್ಕಾಗಿ ಅವರು ಖಂಡಿತವಾಗಿ ನರಕಕ್ಕೆ ಹೋಗಬೇಕಾಗಬಹುದು.

ನಾನು ಮುಖ್ಯವಾಗಿ ಈ ಒಂದು ವಿಚಾರವನ್ನು ಗಮನಕ್ಕೆ ತರಲಿಚ್ಛಿಸುತ್ತೇನೆ: ನಾನು ಈ ದಿನ ತಪ್ಪದೆ ನಿಮ್ಮ ಮುಂದೆ ತರಲು ಬಯಸಿದ ಒಂದು ಸಂಗತಿಯೆಂದರೆ ಶಿಷ್ಯರು ಯೆಸುವಿಗೆ ಕೇಳಿದ ಒಂದು ಪ್ರಶ್ನೆ: ಸ್ವಲ್ಪ ಜನರು ಮಾತ್ರವೇ ರಕ್ಷಣೆ ಹೊಂದುವರೋ? ಎಂಬುದು. ಅದು ಒಂದು ಉತ್ತಮ ಪ್ರಶ್ನೆಯೇ, ಅಲ್ಲವಾ? ಬಹಳಷ್ಟು ಜನರು ರಕ್ಷಣೆ ಹೊಂದಿದ್ದಾರೋ? ಅಥವಾ ಕೆಲವರು ಮಾತ್ರವೇ ರಕ್ಷಿಸಲ್ಪಟ್ಟಿದ್ದಾರೋ? ಬಹಳಷ್ಟು ಜನರು ಪರಲೋಕಕ್ಕೆ ಹೋಗುವರೆಂದು ನಿಮ್ಮೊಳಗೆ ಎಷ್ಟು ಜನರು ಭಾವಿಸುವಿರಿ-ಅಂದರೆ ಈ ಲೋಕದಲ್ಲಿನ ಬಹಳಪಾಲು ಜನರು ಪರಲೋಕಕ್ಕೆ ಹೋಗುವರೆಂದು ನಂಬುತ್ತೀರಾ? ಉತ್ತರವೇನೆಂದು ಊಹಿಸಿರಿ: ಆತನು ಹೇಳಿದನು ” ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ” (ಮತ್ತಾಯ 7:13-14). ಆತನು ಇನ್ನೂ ಹೇಳಿದ್ದೇನೆಂದರೆ, “ನನ್ನನ್ನು ಕರ್ತನೇ, ಕರ್ತನೇ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಕರ್ತನೇ, ಕರ್ತನೇ,ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ? ಎಂದು ಆ ದಿನದಲ್ಲಿ ಎಷ್ಟೋ ಮಂದಿ ನನಗೆ ಹೇಳುವರು. ಆಗ ನಾನು ಅವರಿಗೆ- ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿ ನಡೆಯುವವರೇ ನನ್ನನ್ನು ಬಿಟ್ಟು ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು” (ಮತ್ತಾಯ 7:21-23)

ಮೊಟ್ಟಮೊದಲನೆಯದಾಗಿ, ಲೋಕದ ಬಹುಪಾಲು ಜನರು ಯೇಸುವಿನಲ್ಲಿ ನಂಬಿಕೆಯಿರುವದಾಗಿ ಹೇಳಿಕೊಳ್ಳುವದಿಲ್ಲ. ಒಳ್ಳೇದೆನೆಂದರೆ, ಈ ತರಗತಿಯಲ್ಲಿರುವ ಬಹಳಷ್ಟು ಜನರು ಯೇಸುವಿನಲ್ಲಿ ನಂಬಿಕೆಯಿರುವದಾಗಿ ಒಪ್ಪಿಕೊಳ್ಳುತ್ತಾರೆಂದು ಸಂತೋಷಿಸುತ್ತೇನೆ ಆದರೆ ಲೋಕದ ಬಹುಪಾಲು ಜನ ಅದನ್ನು ಒಪ್ಪಿಕೊಳ್ಳುವದಿಲ್ಲ. ಆದರೆ ಯೇಸುವಿನಲ್ಲಿ ನಂಬಿಕೆಯಿಡುತ್ತೇವೆಂದು ಹೇಳಿಕೊಳ್ಳುವವರ ನಡುವೆಯೂ ಸಹ ಇರುವ ಕೆಲವರ ಕುರಿತು ದೇವರು ಎಚ್ಚರಿಸಿದ್ದಾನೆ.ಆ ದಿನದಲ್ಲಿ ಆತನನ್ನು ಕರ್ತನೆಂದು ಕರೆಯುವ ಅನೇಕರು ಸಹ ಬಂದು “ ಕರ್ತನೇ, ನಾವು ಈ ಮಹತ್ಕಾರ್ಯಗಳನ್ನೆಲ್ಲಾ ಮಾಡಲಿಲ್ಲವೋ? ನಾವು ರಕ್ಷಣೆ ಹೊಂದಿದವರಲ್ಲವೋ!” ಎಂದು ಕೇಳುವರು. ಆತನು ಅವರಿಗೆ “ ನಿಮ್ಮ ಗುರುತು ನನಗಿಲ್ಲ, ನನ್ನನ್ನು ಬಿಟ್ಟು ತೊಲಗಿಹೋಗಿರಿ” ಎಂದು ಅವರಿಗೆ ಹೇಳಲಿರುವನು. ಅದಕ್ಕೆ ಕಾರಣವೇನೆಂದರೆ, ರಕ್ಷಣೆ ನಮ್ಮ ಕೃತ್ಯಗಳಿಂದಾಗುವದಿಲ್ಲ, ಮತ್ತು ನಿಮ್ಮ ಸ್ವಂತ ಕ್ರಿಯೆಗಳು ನಿಮ್ಮನ್ನು ರಕ್ಷಿಸುತ್ತವೆಂದು ನೀವು ನಂಬುವದಾದರೆ, ನೀವು ದೀಕ್ಷಾಸ್ನಾನ ಹೊಂದಿದ್ದರಿಂದ ಪರಲೋಕಕ್ಕೆ ಹೋಗುವಿರೆಂದು ಭಾವಿಸುವದಾದರೆ ನಿರಾಶರಾಗುವಿರಿ. ನೀವು ಹೀಗೆ ಯೋಚಿಸಬಹುದು, “ ನೀವು ಒಳ್ಳೆ ಜೀವನ ನಡೆಸಬೇಕು, ನೀವು ಆಜ್ಞೆಗಳನ್ನು ಕೈಕೊಂಡು ನಡೆಯಬೇಕೆಂದು ಭಾವಿಸುತ್ತೇನೆ, ನೀನು ಚರ್ಚ್ ಗೆ ಹೋಗಬೇಕು, ನೀನು ನಿನ್ನ ಪಾಪಗಳನ್ನು ಬಿಟ್ಟು ತಿರುಗಿಕೊಳ್ಳಬೇಕು…..” ಎಂದು ನೀವು ಹೇಳಬಹುದು. ನೀವು ನಿಮ್ಮ ಸ್ವಕಾರ್ಯಗಳಲ್ಲಿ ವಿಶ್ವಾಸವಿಡುವದಾದರೆ, ಯೇಸು ಆ ದಿನದಲ್ಲಿ ನಿಮಗೆ ” ನಿಮ್ಮ ಗುರುತು ನನಗಿಲ್ಲ, ನನ್ನನ್ನು ಬಿಟ್ಟು ತೊಲಗಿಹೋಗಿರಿ” ಎಂದು ಯೇಸು ಹೇಳುವನು.

ಆತನು ಮಾಡಿರುವ ಕಾರ್ಯದಲ್ಲಿ ನೀವೆಲ್ಲರೂ ನಂಬಿಕೆಯಿಡಬೇಕು. ಯೇಸು ಶಿಲುಬೆ ಮೇಲೆ ನಿನಗಾಗಿ ಸತ್ತನು, ಹೂಣಲ್ಪಟ್ಟನು, ಮತ್ತು ಪುನರುತ್ಥಾನಗೊಂಡು ಎದ್ದನು, ಈ ಕಾರ್ಯದಲ್ಲಿ ನೀವು ನಂಬಿಕೆಯನ್ನಿಡಬೇಕು. ಪರಲೋಕಕ್ಕೆ ಹೋಗಲು ಅದೇ ನಿಮಗಿರುವ ಪಾಸ್ ಪೋರ್ಟ್. ನೀವು ಬೇರೆ ಸಂಗತಿಗಳಲ್ಲಿ ವಿಶ್ವಾಸವಿಡುವರಾಗಿ, “ ಓ, ನಾನೊಬ್ಬ ಉತ್ತಮ ಕ್ರೈಸ್ತನು, ನಾನು ಈ ಎಲ್ಲಾ ಮುತ್ಕಾರ್ಯಗಳನ್ನೆಲ್ಲಾ ಮಾಡಿದ್ದೇನೆ, ಆದ್ದರಿಂದ ನಾನು ಪರಲೋಕಕ್ಕೆ ಹೋಗುವದು ಗ್ಯಾರಂಟಿ” ಎಂದು ಹೇಳಿಕೊಳ್ಳಬಹುದು. ಆಗ ಆತನು ನಿಮಗೆ ” ನನ್ನನ್ನು ಬಿಟ್ಟು ತೊಲಗಿಹೋಗಿರಿ” ಎನ್ನುವನು. ಆತನ ಮಾತುಗಳನ್ನು ಗಮನಿಸಿರಿ, “ ನೀವು ಯಾರೆಂದು ನಾನು ಅರಿಯೆನು, ನನ್ನನ್ನು ಬಿಟ್ಟು ತೊಲಗಿಹೋಗಿರಿ”. ಆತನು “ ಒಂದು ಸಮಯದಲ್ಲಿ ನಿಮ್ಮ ಬಗ್ಗೆ ಪರಿಚಯವಿತ್ತು” ಎಂದು ಆತನು ಹೇಳಲಿಲ್ಲ. ಒಂದು ವೇಳೆ ನಿಮ್ಮನ್ನು ಆತನು ತಿಳಿದಿದ್ದರೆ….ಅದು ನಿತ್ಯವಾದದ್ದೆಂದು ಈ ಮುಂಚೆ ನಾನು ನಿಮಗೆ ಹೇಳಿದ್ದು ನೆನಪಿರಲಿ. ಒಮ್ಮೆ ಆತನು ನಿಮ್ಮನ್ನು ಅರಿತರೆ, ನೀವು ಸದಾಕಾಲಕ್ಕೂ ರಕ್ಷಿಸಲ್ಪಟ್ಟಿರೆಂದು ಅರ್ಥವಾಗಿದೆ. ಆತನು ಆಗ “ ನನ್ನನ್ನು ಬಿಟ್ಟು ತೊಲಗಿಹೋಗಿ, ನಿಮ್ಮನ್ನು ಆರಿಯೆನು”ಎಂದು ಆತನು ಹೇಳುವದಿಲ್ಲ. ಆದ್ದರಿಂದ ನೀವು ನರಕಕ್ಕೆ ಹೋದರೆ ಆತನಿಗೆ ನಿಮ್ಮ ಪರಿಚಯವೆ ಇಲ್ಲವೆಂದು ಅರ್ಥವಾಗಿದೆ. ಯಾಕೆಂದರೆ ಆತನು ನಿಮ್ಮನ್ನು ಒಮ್ಮೆ ಬಲ್ಲವನಾದರೆ, ಅದು ಶಾಶ್ವತ. ನನಗೆ ಹುಟ್ಟಿದ ಮಕ್ಕಳು ಯಾವಾಗಲೂ ನನ್ನ ಮಕ್ಕಳೇ ಆಗಿರುವ ಪ್ರಕಾರ ನಾವು ಆತನ ಮಕ್ಕಳಾಗಿರುತ್ತೇವೆ. ನೀನು ಹೊಸದಾಗಿ ಹುಟ್ಟಿದಾಗ, ಆತನ ಮಕ್ಕಳಾದಾಗ, ಯಾವಾಗಲೂ ಆತನ ಮಕ್ಕಳಾಗಿಯೇ ಉಳಿಯುವಿರಿ. ನೀವು ಕುಟುಂಬದ ಕಪ್ಪು ಕುರಿಯಾಗಿದ್ದಿರಬಹುದು. ನೀವು ಭೂಮಿಯಲ್ಲಿ ದೇವರಿಂದ ಘೋರವಾಗಿ ಶಿಕ್ಷಿಸಲ್ಪಟ್ಟವರಾಗಿರಬಹುದು. ನೀವು ಇಲ್ಲಿ ನಿಮ್ಮ ಜೀವನವನ್ನು ಕೇಡಿಸಿಕೊಂಡಿರಬಹುದು, ಆದರೆ ನಿಮ್ಮ ರಕ್ಷಣೆಯನ್ನು ನೀವು ಎಂದಿಗೂ ಕೇಡಿಸಿಕೊಳ್ಳಲಾರಿರಿ.

ನೀವು ಒಮ್ಮೆ ರಕ್ಷಣೆ ಹೊಂದಿದರೆ, ಆದು ಮುಗಿದ ವಿಷಯ. ಅಂತ್ಯದಿನಗಳ ವಿಷಯವಾಗಿ ನಾನು ನಿಮ್ಮ ಮುಂದೆಯಿಡಲು ಇಚ್ಚಿಸಿದ ಮುಖ್ಯ ಸಂಗತಿ ಇದೆಯಾಗಿದೆ, ಮತ್ತು ರಕ್ಷಣೆ ಅಥವಾ ಅಂತ್ಯದಿನಗಳ ಕುರಿತಾಗಿ ಪ್ರಶ್ನೆ ಕೇಳಲು ನಮಗೆ ಕೆಲವು ನಿಮಿಷಗಳಿರುತ್ತವೆ

 

 

 

mouseover